ನಾಶವಾದ ಅರಬ್ಬರು (ಅರಬ್ಬಿ: العرب البائدة) ― ಅರೇಬಿಯನ್ ಪರ್ಯಾಯ ದ್ವೀಪದ ಮೂಲ ನಿವಾಸಿಗಳು. ಇವರ ಇತಿಹಾಸದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಆದ್, ಸಮೂದ್, ತಸ್ಮ್, ಜದೀಸ್, ಉಮೈಮ್, ಒಂದನೇ ಜುರ್ಹುಂ, ಇಮ್ಲಾಕ್, ಮುಂತಾದ ಬುಡಕಟ್ಟುಗಳು ಈ ವಿಭಾಗದಲ್ಲಿ ಒಳಪಡುತ್ತದೆ. ಇವರು ಅತ್ಯಂತ ಪ್ರಾಚೀನ ಅರಬ್ಬರಾಗಿದ್ದು ಸಂಪೂರ್ಣ ನಾಶವಾಗಿ ಹೋಗಿದ್ದಾರೆ. ಇವರ ಕುರುಹುಗಳು ಮತ್ತು ಸ್ಮರಣೆಗಳ ಹೊರತು ಬೇರೇನೂ ಬಾಕಿಯಾಗಿಲ್ಲ. ಆದ್ ಬುಡಕಟ್ಟಿನವರು ಆದ್ ಬಿನ್ ಔಸ್ () ಬಿನ್ ಇರಮ್ () ಬಿನ್ ಸಾಮ್ () ಬಿನ್ ನೋಹ್ () ರ ಸಂತತಿಗಳು. ಸಮೂದ್ ಬುಡಕಟ್ಟಿನವರು ಸಮೂದ್ ಬಿನ್ ಗಾಸಿರ್ () ಬಿನ್ ಇರಮ್ () ಬಿನ್ ಸಾಮ್ () ಬಿನ್ ನೋಹ್ () ರ ಸಂತತಿಗಳು. ತಸ್ಮ್ ಬುಡಕಟ್ಟಿನವರು ತಸ್ಮ್ ಬಿನ್ ಲಾವಿಝ್ ಬಿನ್ ಶೇಮ್ ಬಿನ್ ನೋಹ್ ರ ಸಂತತಿಗಳು. ಜದೀಸ್ ಬುಡಕಟ್ಟಿನವರು ಜದೀಸ್ ಬಿನ್ ಗಾಸಿರ್ ಬಿನ್ ಇರಮ್ ಬಿನ್ ಶೇಮ್ ಬಿನ್ ನೋಹ್ ರ ಸಂತತಿಗಳು. ಉಮೈಮ್ ಬುಡಕಟ್ಟಿನವರು ಉಮೈಮ್ ಬಿನ್ ಲಾವಿಝ್ ಬಿನ್ ಶೇಮ್ ಬಿನ್ ನೋಹ್ ರ ಸಂತತಿಗಳು. == ಉಲ್ಲೇಖಗಳು ==